ಬೆಂಗಳೂರು: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಎಸ್‌ಐ ಒಬ್ಬರ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎಸ್‌ಐ ಕುಮಾರ್ ವಿರುದ್ಧ ಗುತ್ತಿಗೆದಾರರೊಬ್ಬರು ಲೋಕಾಯುಕ್ತಕ್ಕೆ ನೀಡಿದ ದೂರಿನನ್ವಯ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಜೀಪನ್ನು ಮನೆಯಲ್ಲೇ ಬಿಟ್ಟು ಆರೋಪಿ ಕುಮಾರ್ ಪರಾರಿಯಾಗಿದ್ದಾರೆ.
ಗುತ್ತಿಗೆದಾರರಾಗಿರುವ ಚಿನ್ನೇಗೌಡ ಎಂಬವರ ಕುಟುಂಬಕ್ಕೆ ಕುಮಾರ್ ಕಿರುಕುಳ ನೀಡಿದ್ದಲ್ಲದೆ, ಅವರ 4 ಕೋಟಿ ಮೌಲ್ಯದ ಮನೆಯನ್ನು 60 ಲಕ್ಷಕ್ಕೆ ತಾನು ಹೇಳಿದವರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದುದಾಗಿ ತಿಳಿದು ಬಂದಿದೆ. ಹಾಗೆಯೇ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬಿ ರಿಪೋರ್ಟ್ ಹಾಕುವುದಾಗಿಯೂ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.