ಮಂಗಳೂರು: ಕೆಲ ದಿನಗಳ ಹಿಂದಷ್ಟೇ ಬಜ್ಪೆಯ ಸೂರಲ್ಪಾಡಿಯಲ್ಲಿ ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟ ಮಾಡಿ ಭಜರಂಗದಳದ ಕಾರ್ಯಕರ್ತರಿಂದ ತಡೆಯಲ್ಪಟ್ಟ ಅಕ್ರಮ ಗೋಸಾಗಾಟಗಾರರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಳ್ತಂಗಡಿಯ ಮಹಮ್ಮದ್ ತೌಸಿಫ್, ಫಾರಿಸ್ ಸಲಾಂ, ತೋಕೂರಿನ ಅರಾಫತ್ ಅಲಿ, ಮಹಮ್ಮದ್ ಅಫ್ರೀದ್, ಮೂಡಬಿದ್ರೆಯ ಅಬ್ದುಲ್ ನಜೀರ್ ಎಂದು ಗುರುತಿಸಲಾಗಿದೆ.
ಕಳೆದ ಮಾರ್ಚ್ 28 ರಂದು ಈ ಆರೋಪಿಗಳು ಅಕ್ರಮವಾಗಿ, ದನಗಳ ಕಾಲುಗಳನ್ನು ಕಟ್ಟಿ ನೇತು ಹಾಕಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಅವರ ವಾಹನವನ್ನು ಅಡ್ಡ ಗಟ್ಟಿ, ಗೋವುಗಳನ್ನು ರಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ತಮ್ಮ ವಾಹನ ಬಿಟ್ಟು ಪರಾರಿಯಾಗಿದ್ದರು.