ಮಂಗಳೂರು: ಗಾಂಜಾ ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಕರ್ನಕಟ್ಟೆ ಕಕ್ಕೆಬೆಟ್ಟು ನಿವಾಸಿ ಜ್ಞಾನೇಶ್ ರೈ ಮತ್ತು ದತ್ತನಗರ ನಿವಾಸಿ ಕೌಶಿಕ್ ಎಂದು ಗುರುತಿಸಲಾಗಿದೆ.
ಇವರನ್ನು ಶಿವ ಬಾಗ್ ಮತ್ತು ಬಿಕರ್ನಕಟ್ಟೆ ಬಳಿಯಿಂದ ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದು, ವೈದ್ಯಕೀಯ ತಪಾಸಣೆಯ ವೇಳೆ ಇವರಿಬ್ಬರೂ ಅಮಲು ಪದಾರ್ಥ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಈರ್ವರು ಆರೋಪಿಗಳ ಮೇಲೆ ಮಾದಕ ದ್ರವ್ಯ ಕಾಯ್ದೆಯಡಿ ಕೇಸು ದಾಖಲಾಗಿದೆ.