ಮಡಿಕೇರಿ: ಅಕ್ರಮವಾಗಿ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಯನ್ನು ಕೇರಳದಿಂದ ಮಾರಾಟ ಮಾಡಲಿ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಸುಮಾರು 10 ಕೋಟಿ ರೂ. ಮೌಲ್ಯದ 10 ಕೆ.ಜಿ.ಗೂ ಅಧಿಕ ತಿಮಿಂಗಿಲದ ವಾಂತಿಯನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ತಿರುವನಂತಪುರದ ಶಂಶುದ್ದೀನ್ ಎಸ್., ಎಂ. ನವಾಜ್, ಕಣ್ಣೂರಿನ ವಿ.ಕೆ. ಲತೀಶ್, ರಿಜೇಶ್ ವಿ., ಪ್ರಶಾಂತ್ ಟಿ., ಶಿವಮೊಗ್ಗದ ರಾಘವೇಂದ್ರ ಎ.ವಿ., ಕಾಸರಗೋಡಿನ ಬಾಲಚಂದ್ರ ನಾಯಕ್, ಕ್ಯಾಲಿಕಟ್‌ನ ಸಾಜು ಥೋಮಸ್, ಕಣ್ಣೂರಿನ ಜೋಬಿಸ್ ಕೆ.ಕೆ., ಜಿಜೇಶ್ ಎಂ. ಎಂದು ಗುರುತಿಸಲಾಗಿದೆ.