ವಿಜಯಪುರ: ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಲೆಯನ್ನು ಎ. 15 ರಂದು ಕಡಿಯುವುದಾಗಿ ಬೆದರಿಕೆ ಒಡ್ಡಿ ಮುಸ್ಲಿಂ ಯುವಕನೊಬ್ಬ ಆಡಿಯೋ ಹರಿಯಬಿಟ್ಟಿದ್ದಾನೆ.
ಅಡಿಯೋದಲ್ಲಿ ಯತ್ನಾಳ್ ವಿರುದ್ಧ ಪ್ರತಿಭಟನೆಗೆ ಎಲ್ಲರೂ ಸಿದ್ಧರಾಗಿ ಎಂದು ಹೇಳಲಾಗಿದ್ದು, ಯತ್ನಾಳ್ ಮನೆಗೆ ರ್ಯಾಲಿ ಹೊರಡುವಂತೆಯೂ ಪ್ರಚೋದನೆ ನೀಡಲಾಗಿದೆ. ಅಂಬೇಡ್ಕರ್ ಸರ್ಕಲ್‌ನಿಂದ ಯತ್ನಾಳ್ ಮನೆಗೆ ನುಗ್ಗಲು ಪ್ರಚೋದಿಸಲಾಗಿದೆ.
ಹಾಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವಂತೆಯೂ ಪ್ರೇರಣೆ ನೀಡಲಾಗಿದೆ. ಈ ಬಾರಿ ಯತ್ನಾಳ್ ಅವರ ಫೈನಲ್ ಡೇ ಆಗಿರಲಿದೆ. ಆತ ಈ ಬಾರಿ ಅರೆಸ್ಟ್ ಆಗಬೇಕು ಇಲ್ಲವೇ ಆತನ ತಲೆ ಕಡಿಯಬೇಕು. ಸರ್ ತನ್ನ ಸೇ ಜುದಾ ಎಂದು ಈ ಅಡಿಯೋದಲ್ಲಿ ಹೇಳಲಾಗಿದೆ.
ಎ.15 ಯತ್ನಾಳ್ ಕೊನೆಯ ದಿನವಾಗಿದ್ದು, ಅಂದು ಆತ ಜನ್ನತ್‌ಗೆ ಹೋಗುತ್ತಾನೆ. ಈ ಬಗ್ಗೆ ಮುಸ್ಲಿಂ ಮುಖಂಡರ ಜೊತೆಗೂ ಚರ್ಚೆ ನಡೆದಿದೆ. ಇದಕ್ಕಾಗಿ ಎಲ್ಲಾ ನಿರ್ಧಾರಗಳೂ ಈಗಾಗಲೇ ಕೊನೆಯಾಗಿವೆ ಎಂದು ಅದರಲ್ಲಿ ಹೇಳಲಾಗಿದೆ.