ಮಂಗಳೂರು: ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದೇರಳಕಟ್ಟೆಯ ಮೊಹಮ್ಮದ್ ಆಸಿಫ್, ಮುಕ್ಕ ಸುರತ್ಕಲ್ ನಿವಾಸಿ ಅಸ್ಗರ್ ಅಲಿ, ಕೃಷ್ಣಾಪುರ 6 ನೇ ಬ್ಲಾಕ್ ನಿವಾಸಿ ಮೊಹಮ್ಮದ್ ರಶೀಮ್ ಎಂದು ಗುರುತಿಸಲಾಗಿದೆ.
ಖಾಸಗಿ ಬಸ್ ಮೂಲಕ ನಿಷೇಧಿತ ಡ್ರಗ್ಸ್ ಅನ್ನು ತಂದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಆರೋಪಿಗಳು ಇನ್ನೋವಾ ಕಾರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಅದರ ಆಧಾರದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 1 ಲಕ್ಷ ಮೌಲ್ಯದ ನಿಷೇಧಿತ ಡ್ರಗ್ಸ್, 4000 ರೂ. ನಗದು, 4 ಮೊಬೈಲ್ ಫೋನ್, ಇನ್ನೊವಾ ಕಾರು ಸೇರಿ ಒಟ್ಟು 9,24,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.