ಪಡುಬಿದ್ರಿ: ವ್ಯಾಗನರ್ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರೆ ಸಮೀಪದ ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್ ಬಳಿ ಸಂಭವಿಸಿದೆ.
ಕಾವೂರು ಮೂಲದ ಪುರುಷೋತ್ತಮ ಆರ್. ಆಭ್ಯಂಕರ್ ಅವರ ಪತ್ನಿ ಸುಮಂಗಲಾ ಎಂ. (56) ಮೃತ ಮಹಿಳೆ. ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಒಮ್ಮೆಲೇ ರಸ್ತೆಯ ತೀರ ಎಡಕ್ಕೆ ಚಲಿಸಿ ಡಾಮರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಯಿತು. ಅಲ್ಲಿಂದ ಮುಂದಕ್ಕೆ ಸಾಗಿದ ಕಾರು ರಸ್ತೆಯ ಬದಿಯಲ್ಲಿದ್ದ ಸಿಮೆಂಟ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಸ್ಥಳೀಯರು ಮಹಿಳೆಯನ್ನು ಕಾರಿನಿಂದ ಬಿಡಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. ಪುರುಷೋತ್ತಮ ಆರ್. ಆಭ್ಯಂಕರ್ ದಂಪತಿ ಮಾಳದಲ್ಲಿ ನಡೆಯಲಿದ್ದ ಉಪನಯನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆಂದು ತಿಳಿದುಬಂದಿದೆ.