ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ. ವಿ. ರಾಜೇಶ್ ಜೀ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಇದು ರಾಜ್ಯಮಟ್ಟದಲ್ಲಿ ಪ್ರಭಾವಿ ಹುದ್ದೆಯಾಗಿದ್ದು, ಎತ್ತಂಗಡಿ ವಿಷಯ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಕಳೆದ ಬಾರಿ ಕೋಡಿಕಲ್‌ನಲ್ಲಿ ಮಾಡಿದ್ದ ಪೊರಪಾಟುಗಳಿಂದಾಗಿ ಬಿಜೆಪಿ ಕಾರ್ಯಕರ್ತರಿಂದಲೇ ಭಾರೀ ಟ್ರೋಲ್‌ಗೊಳಗಾಗಿದ್ದರು. ಈ ಕೋಡಿಕಲ್ ಮಲ್ಲಿಗೆಯ ಪರಿಮಳ ಬಿಜೆಪಿ ಹೈಕಮಾಂಡ್‌ಗೆ ಗೊತ್ತಾಗಿರುವುದು ಕೂಡಾ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡಲು ಕಾರಣವಾಗಿದೆ ಎನ್ನಲಾಗಿದೆ. ವಿಶೇಷವೆಂದರೆ ಅವರನ್ನು ಎತ್ತಂಗಡಿ ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಭಾರೀ ಹರ್ಷ ವ್ಯಕ್ತಪಡಿಸುತ್ತಿದ್ದು, ಪಕ್ಷದ ನಿರ್ಧಾರವನ್ನು ಸ್ವಾಗತಿಸಿ ಈ ಕಾರ್ಯವನ್ನು ಹಿಂದೆಯೇ ಮಾಡಿದ್ದರೆ ಪಕ್ಷಕ್ಕೆ ಈ ದುರ್ಗತಿ ಬರುತ್ತಿರಲಿಲ್ಲ ಎಂದು ಜಾಲತಾಣಗಳಲ್ಲಿ ಪೋಸ್ಟ್ ಮಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ. ಪಕ್ಷದ ಕಾರ್ಯಕರ್ತರು ಈ ರೀತಿ ಹರ್ಷ ವ್ಯಕ್ತಪಡಿಸಲು ಕಾರಣವೇನಿರಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಕೋಡಿಕಲ್‌ನಲ್ಲಿ ನಡೆದಿದ್ದೇನು?
ಕಳೆದ ವರ್ಷ ಇವರು ಕೋಡಿಕಲ್‌ನಲ್ಲಿ ಒಂದು ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರೆನ್ನಲಾಗಿದ್ದು, ಇದು ಕಾರ್ಯಕರ್ತರ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಈ ಬಗ್ಗೆ ಬಾರೀ ಟ್ರೋಲ್‌ಗೆ ಒಳಗಾಗಿದ್ದು, ಇದು ಪಕ್ಷಕ್ಕೆ ಮುಜುಗರ ತಂದಿತ್ತು. ಈ ಬಗ್ಗೆ ಮಂಗಳೂರಿನ ಸಂಘದ ಹಿರಿಯ ವ್ಯಕ್ತಿಯೊಬ್ಬರು ರಾಜೇಶ್ ಜೀ ಅವರ ಬಗ್ಗೆ ಹೈಕಮಾಂಡ್ ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು ಎನ್ನಲಾಗಿದೆ ಇದು ಕೂಡಾ ಅವರ ಎತ್ತಂಗಡಿಗೆ ಕಾರಣವಾಯಿತಾ ಎನ್ನುವ ಪ್ರಶ್ನೆ ಮೂಡಿದೆ.
ಆರ್ ಎಸ್ ಎಸ್ ನಲ್ಲಿ ಪ್ರಚಾರಕ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಮೂಲದ ರಾಜೇಶ್ ಅವರನ್ನು 2022 ಜುಲೈನಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಅವಧಿಗೂ ಮುನ್ನವೇ ಜವಾಬ್ದಾರಿಯುತ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿದೆ. ಇದೀಗ ಆರ್‌ಎಸ್ಎಸ್(RSS) ಸಹ ಸಂಸ್ಥೆ ‘ಸಾಮರಸ್ಯ’ದ ಜವಾಬ್ದಾರಿಯನ್ನು ಜಿ.ವಿ ರಾಜೇಶ್ ಅವರಿಗೆ ನೀಡಲಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಉತ್ತರ ಕರ್ನಾಟಕ ಭಾಗದ ಆರ್ ಎಸ್ ಎಸ್ ಪ್ರಮುಖರನ್ನು ನೇಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ
ವಿಶೇಷವೆಂದರೆ ಅವರನ್ನು ಹುದ್ದೆಯಿಂದ ಎತ್ತಂಗಡಿ ಮಾಡಿರುವುದಕ್ಕೆ ಇಡೀ ರಾಜ್ಯ ಬಿಜೆಪಿ ಕಾರ್ಯಕರ್ತರು ಭಾರೀ ಹರ್ಷ ವ್ಯಕ್ತಪಡಿಸಿದ್ದಾರೆ. ತಾನು ಹುದ್ದೆ ಏರಿದ ಬಳಿಕ ಮಾಡಿರುವ ಪೊರಪಾಟುಗಳೇ ಅವರನ್ನು ಎತ್ತಂಗಡಿ ಮಾಡಲಾಯಿತಾ, ಅಥವಾ ಲೆಕ್ಕಭರ್ತಿಗೆ ಹುದ್ದೆ ಅಲಂಕರಿಸಿ ಯಾವ ಘನ ಕಾರ್ಯವನ್ನೂ ಮಾಡದೆ ಕುರ್ಚಿ ಬಿಸಿ ಮಾಡಿರುವುದಕ್ಕೆ ಎತ್ತಂಗಡಿ ಮಾಡಲಾಯಿತಾ ಎನ್ನುವ ಪ್ರಶ್ನೆಗಳು ತೇಲಿಬಂದಿದೆ.
ರಾಜೇಶ್ ಜಿ.ವಿ. 2022 ರ ಜುಲೈಯಲ್ಲಿ ಪಕ್ಷದ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಪ್ರಚಾರಕ ಹುದ್ದೆಯಿಂದ ಸಂಘಟನಾ ಜವಾಬ್ದಾರಿ ವಹಿಸಲಾಗಿತ್ತು. ಸಾಮಾನ್ಯವಾಗಿ ಈ ಹುದ್ದೆಯ ಅವಧಿ ಮೂರು ವರ್ಷದಾಗಿದ್ದು, ಆದರೆ ಅವಧಿಗೂ ಮುನ್ನವೇ ರಾಜೇಶ್ ಅವರನ್ನು ಬದಲಾವಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.
ಪಕ್ಷದ ಹಿರಿಯರ ಜೊತೆ ಸಮನ್ವಯ ಸಾಧಿಸುವುದು, ಸಂಘ ಮತ್ತು ಪಕ್ಷದ ನಡುವೆ ಸೇತುವೆಯಾಗಿ ಕೆಲಸಮಾಡಬೇಕಾಗಿದ್ದ ರಾಜೇಶ್ ತನ್ನ ಜವಾಬ್ದಾರಿಯಿಂದ ವಿಫಲರಾಗಿದ್ದರು ಎನ್ನುವ ವರ್ತಮಾನವೂ ಲಭಿಸಿದೆ.
ಬಿಜೆಪಿಯ ಹಿರಿಯರಾಗಿರುವ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ತೊರೆದಿರುವುದು(ಇದೀಗ ಜಗದೀಶ್ ಶೆಟ್ಟರ್ ವಾಪಸ್ ಆಗಿದ್ದಾರೆ) ಕೆ.ಎಸ್. ಈಶ್ವರಪ್ಪ, ರಘುಪತಿ ಭಟ್ ಬಂಡಾಯ ಸಾರಿದರೂ ಅದರತ್ತ ಗಮನ ಹರಿಸದೆ ತನ್ನ ಪಾಡಿಗೆ ತಾನಿದ್ದುದು ಅಲ್ಲದೆ ರಾಜ್ಯದಲ್ಲಿ ನಡೆದ ಪಕ್ಷದ ಕೆಲಸಗಳನ್ನು ಗಮನಿಸದೆ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲಲು ಕಾರಣರಾಗಿದ್ದರು, ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಬಂದಿರುವ ದೂರುಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದು ಕೂಡಾ ಅವರ ಎತ್ತಂಗಡಿಗೆ ಕಾರಣವಿರಬಹುದು ಎನ್ನುವ ವಿಚಾರ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವವಣೆಯ ಮುನ್ನವೇ ಅವರನ್ನು ಎತ್ತಂಗಡಿ ಮಾಡಬೇಕಿತ್ತು ಎನ್ನುವ ಅಭಿಪ್ರಾಯವೂ ಕಾರ್ಯಕರ್ತರಿಂದ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾಗಿರುವ ಜಿ.ವಿ. ರಾಜೇಶ್ ತಮ್ಮದೇ ಊರಿನಲ್ಲಿ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿ ಸೋಲಲು ಕಾರಣರಾದ ಅರುಣ್ ಪುತ್ತಿಲರಿಗೆ ಬಿಜೆಪಿ ಟಿಕೆಟ್ ತಪ್ಪಿಸಿರುವುದರಲ್ಲಿಯೂ ಇವರ ಕೈವಾಡ ಇದ್ದು, ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಆರೋಪವೂ ಇವರ ಮೇಲಿದೆ ಎನ್ನಲಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಒಬ್ಬ ಪ್ರಭಾವಿ ನಾಯಕನನ್ನು ನೇಮಿಸಿ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂಬ ಆಗ್ರಹ ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬಂದಿದೆ.