ಉಡುಪಿ; ನೈಋತ್ಯ ಪದವೀಧರ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ಟ ಪರ ಪೋಸ್ಟ್ ಹಾಕಿ ಪ್ರಚಾರ ಮಾಡುವ ಅವರ ಅಭಿಮಾನಿಗಳನ್ನು ಕಾಂಗ್ರೆಸ್ ಕಾರ್ಯಕರ್ತರೆಂದು ಬಿಂಬಿಸಿ ಟ್ರೋಲ್ ಮಾಡುವವರಿಗೆ ಕರಾವಳಿಯ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ.
ಎಡಪಂಥೀಯರೊಂದಿಗೆ ಗುರುತಿಸಿಕೊಂಡಿದ್ದ, ಧನಬಲ ಹೊಂದಿರುವ ಕಾಂಗ್ರೆಸ್ ಮುಖಂಡರಾಗಿದ್ದ ಡಾ. ಧನಂಜಯ್ ಸರ್ಜಿ ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರ ಮಾಡಿಕೊಂಡು ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಧಿಕಾರಕ್ಕಾಗಿ ಬಿಜೆಪಿಗೆ ಆಮದು ಆದ ಅಭ್ಯರ್ಥಿಯ ಬಗ್ಗೆ ಕರಾವಳಿಯ ಹಿಂದೂ ಕಾರ್ಯಕರ್ತರು ಗರಂ ಆಗಿದ್ದು, ಸರ್ಜಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪಿಸಿ ವರಿಷ್ಠರ ನಿರ್ಧಾರಕ್ಕೆ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದರು.
ನೈಋತ್ಯ ಪದವೀಧರ ಕ್ಷೇತ್ರದಲ್ಲಿ ರಘುಪತಿ ಭಟ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರಿಗೆ ಎಂಎಲ್‌ಎ ಟಿಕೆಟ್ ನಿರಾಕರಿಸುವಾಗಲೇ ಈ ಕ್ಷೇತ್ರದಿಂದ ಕಣಕ್ಕಿಳಿಸುವ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪದವೀಧರರನ್ನು ಗುರುತಿಸಿ ಅವರಿಗೆ ಮತದಾನದ ಗುರುತಿನ ಚೀಟಿ ಮಾಡಿಕೊಟ್ಟು ಮತದಾರರ ಸಂಖ್ಯೆಯನ್ನು ಹೆಚ್ಚಿಸಿದ್ದರು. ಆದರೆ ಚುನಾವಣೆ ಘೋಷಣೆಯಾದಾಗ ತರಾತುರಿಯಿಂದ ಸರ್ಜಿಯವರನ್ನು ಪಕ್ಷಕ್ಕೆ ಸೇರಿಸಿ ಟಿಕೆಟ್ ನೀಡಿರುವುದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿ ಸೋಷಿಯಲ್ ಮೀಡಿಯಾ ದಲ್ಲಿ ಆಕ್ರೋಶ ವ್ಯಕ್ತಪಡಿಸಿ ಭಟ್ಟರ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಪೈಕಿ ರವೀ ಸಜಂಗದ್ದೆ ಎಂಬವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಭಟ್ಟಂಗಿಗಳು ಸೋಲಲು ಭಟ್ಟರು ಗೆಲ್ಲಲೇಬೇಕು’ ಎಂಬ ಲೇಖನವೂ ಟ್ರೋಲಿಗರ ಆಹಾರವಾಗಿದೆ. ರವೀ ಸಜಂಗದ್ದೆ ಅವರು ಬಿಜೆಪಿ ವರಿಷ್ಠರ ಅಪಭ್ರಂಶಗಳನ್ನು ಬರೆದಿರುವುದು ಟ್ರೋಲಿಗರಿಗೆ ಉರಿಯುವ ಗಾಯಕ್ಕೆ ಉಪ್ಪು ಸವರಿದಂತಾಗಿಯೇ ಇಂಥವರನ್ನು ಕಾಂಗ್ರೆಸ್ ಕಾರ್ಯಕರ್ತರೆಂದು ಬಿಂಬಿಸಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.
ಖಟ್ಟರ್ ಹಿಂದುತ್ವವಾದಿ ರಘುಪತಿ ಭಟ್‌ಗೆ ಟಿಕೆಟ್ ನಿರಾಕರಿಸಿ ಬೇರೆ ಪಕ್ಷದವರನ್ನು ಟಿಕೆಟ್ ನೀಡಿರುವುದು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು, ಇದರ ವಿರುದ್ಧ ಸೆಟೆದು ನಿಂತ ರಘುಪತಿ ಭಟ್ ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಕಾರ್ಯಕರ್ತರೆಂದು ಬಿಂಬಿಸಿ ಟ್ರೋಲ್ ಮಾಡುತ್ತಿರುವುದು ಮತ್ತಷ್ಟು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಆದರೆ ಇಂದು ಕೆಲವೊಂದು ಪಟ್ಟಭದ್ರರ ಕಪಿಮುಷ್ಠಿಗೆ ಸಿಲುಕಿ ಹೈಜಾಕ್ ಆಗುವ ಹಂತಕ್ಕೆ ತಲುಪಿದೆ. ಇದು ತಪ್ಪಬೇಕಾದರೆ ಹಿಂದೂಗಳು ಖಟ್ಟರ್ ಹಿಂದುತ್ವವಾದಿ, ಅಭಿವೃದ್ಧಿಯ ಹರಿಕಾರ ರಘುಪತಿ ಭಟ್ಟರನ್ನು ಗೆಲ್ಲಿಸಬೇಕು. ಈ ಮೂಲಕ ಬಿಜೆಪಿ ಭಟ್ಟಂಗಿಗಳಿಗೆ ಪಾಠ ಕಲಿಸಬೇಕು ಎಂಬ ಅಭಿಪ್ರಾಯ ಕರಾವಳಿಯ ಹಿಂದೂಗಳಿಂದ ವ್ಯಕ್ತವಾಗಿವೆ.