ಶಿರಸಿ: ಕೇಸ್ ಒಂದರ ವಿಚಾರದಲ್ಲಿ ಲಂಚ ಪಡೆಯುತ್ತಿದ್ದಾಗ ಶಿರಸಿ ನ್ಯಾಯಾಲಯದ ಎಎಪಿ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಎಪಿ ಪ್ರಕಾಶ ಲಮಾಣಿ ಅವರೇ ಲೋಕಾಯುಕ್ತದ ಬೋನಿಗೆ ಬಿದ್ದವರು.
ಬದನಗೋಡದ ಪವನ್ ಕುಮಾರ್ ಎನ್ನುವರಿಂದ ಲಂಚದ ಹಣ ಸ್ವೀಕರಿಸುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಈ ಹಣವನ್ನು ಪಡೆಯುವಾಗಲೇ ಪ್ರಕಾಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳವಾದ ವಸ್ತುಗಳು ನ್ಯಾಯಾಲಯಕ್ಕೆ ರಿಕವರಿ ಆಗಿದ್ದು, ಅವುಗಳನ್ನು ಬಿಡಿಸಿಕೊಡಲು ಪ್ರಕಾಶ್ 6,000 ರೂ. ಲಂಚ ಕೇಳಿದ್ದಾಗಿ ತಿಳಿದು ಬಂದಿದೆ. 500 ರೂ. ಗಳನ್ನು ಅವರ ಹೆಂಡತಿಯ ಫೋನ್ ಪೇಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಲಂಚ ಪಡೆಯುವಾಗಲೇ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.