ಮಂಗಳೂರು: ಫರಂಗಿಪೇಟೆಯಲ್ಲಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗಾಂಜಾ ವ್ಯಸನಿಗಳ ತಂಡದ ಕೈವಾಡ ಇದೆಯೋ ಎನ್ನುವಂತಹ ಶಂಕೆ ವ್ಯಕ್ತವಾಗಿದೆ. ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಎರಡು ದಿನಗಳೇ ಕಳೆದಿವೆ. ಆದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ದಿಗಂತ್ ಮನೆಗೆ ಹಿಂದೂ ಸಂಘಟನೆಯ ನಾಯಕ ಶರಣ್ ಪಂಪ್ವೆಲ್ ಮತ್ತು ಇತರರು ಆಗಮಿಸಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ. ದಿಗಂತ್ ನಾಪತ್ತೆಯಾದ ಸಮಯದಲ್ಲಿ ಅಪರಿಚಿತ ಕ್ವಾಲಿಸ್ ವಾಹನವೊಂದು ಆಂಜನೇಯ ದೇವಾಲಯದ ಆಸುಪಾಸಿನಲ್ಲಿ ಓಡಾಟ ನಡೆಸಿದ್ದು, ಇದು ದೇಗುಲದ ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ಕಾರು ಯಾರದ್ದು, ಅದರಲ್ಲಿ ದಿಗಂತ್‌ನನ್ನು ಅಪಹರಣ ಮಾಡಲಾಗಿದೆಯೇ ಎಂದು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಹೇಳಿವೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.