ಕಾರ್ಕಳ: ಬಸ್ಸುಗಳೆರಡರ ನಡುವೆ ಅಪಘಾತ ಸಂಭವಿಸಿರುವ ಘಟನೆ ಪಡುಬಿದ್ರೆ ಹೆದ್ದಾರಿ ಸಂಪರ್ಕಿಸುವ ಪರ್ಪಲೆ ಕುಂಟಲ್ಪಾಡಿಯಲ್ಲಿ ನಡೆದಿದೆ.
ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುತ್ತಿದ್ದ ವಿಶಾಲ್ ಎಂಬ ಬಸ್‌ಗೆ ಮುಂಬಯಿಗೆ ತೆರಳುತ್ತಿದ್ದ ಆನಂದ್ ಬಸ್ಸು ಢಿಕ್ಕಿಯಾಗಿದೆ. ಈ ಅವಘಡದಲ್ಲಿ ವಿಶಾಲ್ ಬಸ್ಸಿನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಗಾಯಾಳುಗಳಿಗೆ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ವಿಶಾಲ್ ಬಸ್ಸಿನ ಹಿಂಭಾಗ ನಜ್ಜುಗುಜ್ಜಾದ ಪರಿಣಾಮ ಪ್ರಯಾಣಿಕರನ್ನು ಬದಲಿ ಬಸ್ಸಿನಲ್ಲಿ ಕಳುಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.