ಕೊಣಾಜೆ: ಅಂಗಡಿಯೊಂದರಿಂದ ಹಣ, ಸಾಮಾನುಗಳನ್ನು ದೋಚಿದ ಘಟನೆ ನರಿಂಗಾನದ ತೌಡುಗೋಳಿಯಲ್ಲಿ ನಡೆದಿದೆ.
ರಾತ್ರಿ ಸುಮಾರು 2.30 ರ ವೇಳೆಗೆ ವಸಂತ ಎನ್ನುವವರ ಮಾಲಕತ್ವದ ಅಂಗಡಿಗೆ ಹಾಕಲಾಗಿದ್ದ ಕಬ್ಬಿಣದ ಬೀಗವನ್ನು ಮುರಿದು ಒಳನುಗ್ಗಿ, ಕ್ಯಾಶ್ ಕೌಂಟರಿನ ಮರದ ಬಾಗಿಲನ್ನು ಮುರಿದು ಹತ್ತು ಸಾವಿರ ರೂ. ಎಗರಿಸಿದ್ದಾನೆ. ಒಟ್ಟು ನಲವತ್ತು ಸಾವಿರ ರೂ. ಗಳ ಸಾಮಾನು ಕದ್ದೊಯ್ದ ಘಟನೆ ನಡೆದಿದೆ.
ತನ್ನ ಪರಿಚಯ ಸಿಗದಿರಲಿ ಎನ್ನುವ ಕಾರಣಕ್ಕಾಗಿ ಮುಖಕ್ಕೆ ಹಾಕಿದ್ದ ಟೀಶರ್ಟ್ ಬಿಚ್ಚಿ ಕಟ್ಟಿಕೊಂಡಿದ್ದಾನೆ. ಹಾಗೆಯೇ ಹಾರ್ಡ್ ಡಿಸ್ಕ್ ಎಂದು ಭಾವಿಸಿ ವೈ ಫೈ ಸಿಸ್ಟಂ ಅನ್ನು ಹೊತ್ತೊಯ್ದಿದ್ದಾನೆ. ಕಳ್ಳ ಅಂಗಡಿಯಿಂದ ಸುಮಾರು 50 ಮೀ. ದೂರದಲ್ಲಿ ಕಾರನ್ನು ನಿಲ್ಲಿಸಿ ಈ ಕೃತ್ಯ ಎಸಗಿರುವುದಾಗಿದೆ.
ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.