ಬೆಂಗಳೂರು: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ದ ಡಿಐಜಿ ವರ್ತಿಕಾ ಕಟಿಯಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ.
ಕೆಳ ಹಂತದ ಸಿಬ್ಬಂದಿಯನ್ನು ಉಪಯೋಗಿಸಿಕೊಂಡು ಐಪಿಎಸ್ ರೂಪಾ ಮೌದ್ಗಿಲ್ ಅವರು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದು, ಈ ದಾಖಲೆಗಳನ್ನು ಬಳಸಿಕೊಂಡು ರೂಪಾ ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆಗಳು ಇರುವುದಾಗಿ ವರ್ತಿಕಾ ದೂರಿನಲ್ಲಿ ತಿಳಿಸಿದ್ದಾರೆ.
ಕೆಳಹಂತದ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್ ಅವರನ್ನು ಬಳಸಿ ವರ್ತಿಕಾ ಕೊಠಡಿಯಲ್ಲಿ ರೂಪಾ ದಾಖಲೆಗಳನ್ನು ಇರಿಸಿದ್ದಾರೆ. ನಂತರ ವಾಟ್ಸ್ಯಾಪ್ ಮುಖಾಂತರ ಫೋಟೋ ತೆಗೆದಿರಿಸಿದ್ದಾರೆ. ಕೋಣೆಯ ಕೊಠಡಿಯನ್ನು ಕಂಟ್ರೋಲ್ ರೂಂ ನಿಂದ ಕೀ ತಂದು ತೆರೆಯಲಾಗಿದೆ. ಈ ಕೃತ್ಯ ದುರುದ್ದೇಶದಿಂದ ಕೂಡಿದ್ದು, ನನ್ನ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ.