ಬೆಂಗಳೂರು: ಹೆಚ್ಚಿನ ಬಡ್ಡಿ ಪಡೆಯುವ ಆಸೆಗೆ ಒಳಗಾಗಿ ನಕಲಿ ಕಂಪನಿಯಲ್ಲಿ ಹಣ ತೊಡಗಿಸಿ ಕೋಟಿ ಕೋಟಿ ಕಳೆದುಕೊಂಡ ಸಂತ್ರಸ್ತರು ಪೊಲೀಸರಿಗೆ ದೂರು ದಾಖಲಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ 183 ಜನರು ಸುಮಾರು 41 ಕೋಟಿ ರೂ. ಗಳನ್ನು ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ನಕಲಿ ಕಂಪನಿಯಲ್ಲಿ ತೊಡಗಿಸಿ ಕೊಂಡು ಮೋಸ ಹೋಗಿದ್ದಾರೆ. ಹೈದರಾಬಾದ್ ಮೂಲದ ಫಾಲ್ಕನ್ ಇನ್‌ವಾಯ್ಸ್ ಎಂಬ ಸಂಸ್ಥೆ ಕಡಿಮೆ ಸಮಯದ ಹೂಡಿಕೆಗೆ 10% – 22% ವರೆಗೆ ಬಡ್ಡಿ ನೀಡುವುದಾಗಿ ಹೇಳಿ ಅನೇಕರಿಂದ ಹೂಡಿಕೆ ಮಾಡಿಸಿಕೊಂಡಿತ್ತು. ಹಣ ಹೂಡಿಕೆ ಮಾಡಿದವರಿಗೆ ರಿಟರ್ನ್ಸ್ ಬಾರದೆ ಕಂಗೆಟ್ಟು ಕೊನೆಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್, ಪಶ್ಚಿಮ ಸಿಇಎನ್ ಠಾಣೆಯಲ್ಲಿ ಎರಡು ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.
ಈ ನಕಲಿ ಸಂಸ್ಥೆ ದೇಶದಾದ್ಯಂತ ಹಲವರಿಂದ ಹೂಡಿಕೆ ಮಾಡಿಸಿಕೊಂಡಿರುವುದಾಗಿಯೂ ತಿಳಿದು ಬಂದಿದೆ.