ಶಿವಮೊಗ್ಗ: ಧಾರ್ಮಿಕ ಕಾರ್ಯದ ಕಾರಣಕ್ಕೆ ಶಿರಸಿಗೆ ಹೊರಟಿದ್ದ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ವಾಹನ ಕೋಣಂದೂರು ಸಮೀಪ ಸರಣಿ ಅಪಘಾತಕ್ಕೆ ತುತ್ತಾಗಿದೆ.
ಶ್ರೀಗಳ ವಾಹನದ ಮುಂದೆ ಬೆಂಗಾವಲು ವಾಹನ ಮತ್ತು ಹಿಂದೆ ಭಕ್ತರ ವಾಹನ ಇದ್ದು, ಬೆಂಗಾವಲು ವಾಹನಕ್ಕೆ ದನವೊಂದು ಅಡ್ಡ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಅಡ್ಡ ಬಂದ ದನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೆಂಗಾವಲು ವಾಹನ, ಮಧ್ಯೆ ಇದ್ದ ಸ್ವಾಮೀಜಿಗಳ ವಾಹನ ಮತ್ತು ಹಿಂದಿದ್ದ ಭಕ್ತರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯ ಬಳಿಕ ಶ್ರೀಗಳು ಬದಲಿ ವಾಹನದಲ್ಲಿ ಸ್ಥಳದಿಂದ ತೆರಳಿದ್ದಾರೆ.