ಬೆಂಗಳೂರು: ನಗರದ ರಾಗಿ ಗುಡ್ಡ ಮೆಟ್ರೋ ನಿಲ್ದಾಣದ ಸಮೀಪ ಬೈಕೊಂದರಲ್ಲಿ ತ್ರಿಬಲ್ ರೈಡಿಂಗ್ ಮಾಡಿದ್ದಲ್ಲದೆ, ರೈಡರ್ ಹಿಂಬದಿ ಕುಳಿತಿದ್ದ ಸಹಸವಾರರಾದ ಯುವಕ ಮತ್ತು ಯುವತಿ ಚಲಿಸುತ್ತಿರುವ ಬೈಕ್‌ನಲ್ಲೇ ಪರಸ್ಪರ ಮುತ್ತಿಕ್ಕಿದ್ದು, ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೈಕ್ ಮಾಲಕನನ್ನು ಪತ್ತೆ ಮಾಡಿರುವ ಪೊಲೀಸರು ಬೈಕ್ ಮಾಲೀಕನನ್ನು ಪತ್ತೆ ಮಾಡಿ ಆತನಿಗೆ ದಂಡ ವಿಧಿಸಿದ ಘಟನೆ ನಡೆದಿದೆ.
ಬೈಕಿನಲ್ಲಿ ಮೂವರು ಹೋಗುತ್ತಿದ್ದರು, ಇದರಲ್ಲಿ ಹಿಂದೆ ಕುಳಿತು ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯವನ್ನು ಅದರ ಹಿಂಬದಿ ವಾಹನದಲ್ಲಿದ್ದವರು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸೌತ್ ವೈರಲ್ ಆಗಿತ್ತು. ನಡು ರಸ್ತೆಯಲ್ಲಿ ಬೇಕಾಬಿಟ್ಟಿ ವರ್ತಿಸಿದ ಈ ಜೋಡಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಹ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.