ಬೆಂಗಳೂರು: ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಬಿಐ ಪೊಲೀಸರ ವಶದಲ್ಲಿರುವ ನಟಿ ರನ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈ ನಡುವೆ ಕರ್ನಾಟಕ ಸರ್ಕಾರ ರನ್ಯಾ ಒಡೆತನದ ಸಂಸ್ಥೆಗೆ 12 ಎಕರೆ ಭೂಮಿ ಮಂಜೂರು ಮಾಡಿದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಭಾರೀ ಸದ್ದು ಮಾಡಿದ್ದು, ಈ ವಿಚಾರ ನಿಜ ಎನ್ನುವುದನ್ನು ಈಗ ಸ್ವತಃ ಕೆಐಎಡಿಬಿಯ ಸಿಇಒ ಡಾ. ಮಹೇಶ್ ಅವರೇ ಸ್ಪಷ್ಟಪಡಿಸಿದ್ದಾರೆ.
ಜನವರಿ 2, 2023 ರಂದು ರನ್ಯಾ ಒಡೆತನದ ಮೆಸರ್ಸ್ ಸಂಸ್ಥೆಗೆ ಭೂಮಿ ಮಂಜೂರಾಗಿದೆ. ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ವಲಯದಲ್ಲಿ ಭೂಮಿ ನೀಡಲು ಅನುಮೋದಿಸಲಾಗಿದೆ. ಈ ಭೂಮಿಯಲ್ಲಿ ಉಕ್ಕಿನ ವಸ್ತುಗಳನ್ನು ತಯಾರಿಸುವ ಕಂಪನಿ ತೆರೆಯಲಾಗುವುದು ಮತ್ತು ಇದರಿಂದ ಸುಮಾರು 160 ಜನರಿಗೆ ಉದ್ಯೋಗ ಲಭಿಸಲಿದೆ ಎನ್ನುವ ಪ್ರಸ್ತಾವನೆಯನ್ನು ಸಂಸ್ಥೆ ಸಲ್ಲಿಸಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.