ಬೆಂಗಳೂರು: ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳ ಸಮೀಪದಲ್ಲಿರುವ ನದಿ ಅಥವಾ ಇನ್ಯಾವುದೇ ರೀತಿಯ ಜಲಮೂಲಗಳ 500 ಮೀ. ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಮಾಡದಂತೆ ಮತ್ತು ಭಕ್ತಾದಿಗಳು ತಮ್ಮ ವಸ್ತ್ರಗಳನ್ನು ವಿಸರ್ಜನೆ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸಚಿವರು ಕೆಲ ಸಮಯದ ಹಿಂದಷ್ಟೇ ಧರ್ಮಸ್ಥಳ, ಹಾಸನ ಜಿಲ್ಲೆಯ ಸಕಲೇಶಪುರ ಹೀಗೆ ಕೆಲವೊಂದು ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಧರ್ಮಸ್ಥಳದ ಸ್ನಾನ ಘಟ್ಟದ ಬಳಿ ಸೋಪು, ಶ್ಯಾಂಪೂಗಳ ಪಳೆಯುಳಿಕೆಗಳು ರಾಶಿ ರಾಶಿ ಕಂಡು ಬಂದಿತ್ತು. ಜೊತೆಗೆ ಬಟ್ಟೆಗಳು ಸಹ ಕಂಡುಬಂದಿತ್ತು. ಹಾಗೆಯೇ ಸಕಲೇಶಪುರದ ಮೂರು ಕಣ್ಣು ಗುಡ್ಡದ ಬಳಿ ರೆಸಾರ್ಟ್, ಹೋಮ್.ಸ್ಟೇ ಗಳ ನೀರು ನದಿ ಸೇರುವುದು ಗಮನಕ್ಕೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ನದಿ ನೀರು ಕುಡಿಯಲು ಯೋಗ್ಯವೋ ಎನ್ನುವುದನ್ನು ಪರಿಶೀಲನೆ ಮಾಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.