ಮಂಗಳೂರು: ಭಜರಂಗದಳದ ಮುಖಂಡ ಭರತ್ ಕುಮ್ಡೇಲ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಭರತ್ ಅವರು ಕೆಲ ದಿನಗಳ ಹಿಂದೆ ನಾಪತ್ತೆಯಾಗಿ ಸದ್ಯ ಪತ್ತೆಯಾಗಿರುವ ದಿಗಂತ್ ಪ್ರಕರಣದಲ್ಲಿ ಆತನ ಪತ್ತೆಗೆ ಪ್ರತಿಭಟನೆ ನಡೆಸಿದ್ದರು. ಅವರನ್ನು ಕೊಲೆ ಮಾಡುವುದಾಗಿ ಬ್ಯಾರಿ ರಾಯಲ್ ನವಾಬ್, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಹೆಸರಿನ ಪೇಜುಗಳಲ್ಲಿ ಹಾಕಲಾಗಿದೆ.
ಭರತ್ ಅವರು ದಿಗಂತ್ ಪತ್ತೆಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಆತನನ್ನು ಅನ್ಯಮತೀಯರ ಮತ್ತು ಗಾಂಜಾ ಗ್ಯಾಂಗ್‌ಗಳ ಕೈವಾಡ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದರು. ಇದೀಗ ಕೆಲವು ಸಮಾಜ ವಿದ್ರೋಹಿಗಳು, ಸಮಾಜದ ಸಾಮರಸ್ಯಕ್ಕೆ ಭಂಗ ತರುವವರು ‘ಭರತ್ ಕುಮ್ಡೇಲ್ ರಕ್ತ ಹರಿಸದೆ ನಮಗೆ ಸಮಾಧಾನವಿಲ್ಲ’ ಎಂದು ಪೇಜ್‌ಗಳ ಮೂಲಕ ಕ್ರೌರ್ಯ ಪ್ರದರ್ಶನ ಮಾಡಿದ್ದಾರೆ.
ಸಂಘಪರಿವಾರ ಫರಂಗಿಪೇಟೆಯಲ್ಲಿ ಕೋಮು ಸಂಘರ್ಷ ಏರ್ಪಡಿಸಲು ಸ್ಕೆಚ್ ಹಾಕಿತ್ತು. ಅದು ಸಾಧ್ಯವಾಗದಾಗ ಮುಸಲ್ಮಾನರನ್ನು ಗುರಿಯಾಗಿಸಿ ಕೋಮು ಸಾಮರಸ್ಯ ಕದಡಲು ಪ್ರಯತ್ನ ನಡೆಸಿದರು. ದಿಗಂತ್ ಪ್ರಕರಣವನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನ ಮಾಡಿದರೆ ಅಲ್ಲಿಗೆಯೇ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭರತ್ ಕುಮ್ಡೇಲ್ ಅವರು ಎಸ್‌ಡಿಪಿಐ ಮುಖಂಡ ಅಶ್ರಫ್ ಕುಲಾಯಿ ಹತ್ಯೆಯ ಆರೋಪಿಯಾಗಿದ್ದು, ಈ ಘಟನೆಯನ್ನು ನಾವು ಮರೆತಿಲ್ಲ, ಪ್ರತಿರೋಧ ಅಪರಾಧ ಅಲ್ಲ ಎಂದು ಪೇಜ್‌ಗಳ ಮೂಲಕ ಬೆದರಿಕೆ ಹಾಕಿದ್ದಾರೆ.