ಬ್ರಹ್ಮಾವರ: ಆರ್ಥಿಕ ಸಮಸ್ಯೆಯಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಮೃತರನ್ನು ಸೆಲಿನ್ ಡಿಸೋಜಾ(46) ಎಂದು ಗುರುತಿಸಲಾಗಿದೆ. ಇವರು ಚೇರ್ಕಾಡಿ ಗ್ರಾಮದ ಜೋಸೆಫ್ ಡಿಸೋಜಾ ಅವರ ಪತ್ನಿ.
ಮನೆಯ ಹಾಲಿನ ಪಕ್ಕಾಸಿಗೆ ನೇಣು ಹಾಕಿಕೊಂಡು ಸೆಲಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.