ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ.
ಇತ್ತ ರೇಣುಕಾಸ್ವಾಮಿ ಮನೆಯವರು ಗೋಕರ್ಣಕ್ಕೆ ತೆರಳಿ ರೇಣುಕಾಸ್ವಾಮಿಗೆ ಮೋಕ್ಷ ದೊರೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದು, ಆತನ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ದೇವರ ಮುಂದೆ ಕಣ್ಣೀರಿಟ್ಟು ಬೇಡಿಕೊಂಡಿದೆ. ಜೊತೆಗೆ ತಮ್ಮ ಮಗನಿಗಾದ ಸ್ಥಿತಿ ಯಾರಿಗೂ ಬರಬಾರದು ಎಂದು ತಿಳಿಸಿದೆ. ಹಾಗೆಯೇ ತಮ್ಮ ಸೊಸೆಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬುದಾಗಿಯೂ ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.
ಇದಾದ ಬಳಿಕ ನಟ ದರ್ಶನ್ ಸಹ ಗೌಪ್ಯವಾಗಿ ಗೋಕರ್ಣಕ್ಕೆ ತೆರಳಿ ತಮಗೆ ಶಿಕ್ಷೆ ತಪ್ಪಲಿ ಎಂದು ಬೇಡಿಕೊಂಡು ಪೂಜೆ, ಹೋಮ ಹವನ ಮಾಡಿಸಿದ್ದಾಗಿ ಹೇಳಲಾಗುತ್ತಿದೆ. ಗೋಕರ್ಣದ ಅರ್ಚಕರೊಬ್ಬರ ಮನೆಗೆ ತೆರಳಿ ತನಗೆ ನೀಡಿದ ಜಾಮೀನು ಮುಂದುವರೆಯುವ ಹಾಗೆ ಮತ್ತು ಈ ಪ್ರಕರಣದಿಂದ ತನ್ನನ್ನು ಪಾರು ಮಾಡುವಂತೆ ಪ್ರಾರ್ಥಿಸಿ, ಹೋಮ ಯಜ್ಞಗಳನ್ನು ಮಾಡಿಸಿದ್ದಾರೆ ಎನ್ನಲಾಗಿದೆ.