ಬೆಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡಿದ ಆರೋಪದಲ್ಲಿ ಡಿಆರ್‌ಐ ವಶದಲ್ಲಿರುವ ನಟಿ ರನ್ಯಾ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಒಟ್ಟು 6 ಕಡೆಗಳಲ್ಲಿ ಇಡಿ ದಾಳಿ ನಡೆಸಿದ್ದು, ಈ ಪ್ರಕರಣದ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ದೆಹಲಿಯ ಇಡಿ ತಂಡದಿಂದ ಇಡಿ ದಾಳಿ ನಡೆದಿದ್ದು, ಈ ಹಿಂದೆ ರನ್ಯಾ, ಪತಿ ಜತಿನ್, ಗೆಳೆಯ ತರುಣ್ ರಾಜ್ ಮನೆಯ ಮೇಲೆಯೂ ಇಡಿ ಡಿಆರ್‌ಐ ದಾಳಿ ನಡೆಸಿತ್ತು.