ಮಂಗಳೂರು: ಮಾದಕ ದ್ರವ್ಯ ಸೇವಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾವೂರು ಠಾಣಾ ಪೊಲೀಸರು ಮತ್ತು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಮನೀಶ್ (28), TT ರೋಡ್ ನಿವಾಸಿ ಸವಿನ್ ರಾಜ್ (18) ಎಂದು ಗುರುತಿಸಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಮನೀಶ್ ಎಂಬಾತ ಬೊಂದೇಲ್ನ ಕೃಷ್ಣನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾದಕ ವಸ್ತು ಸೇವಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಸವಿನ್ ರಾಜ್ ಬಂದರ್ನ ಉತ್ತರದ ಕಡೆಗೆ ತೆರಳುವ ಮಾರ್ಗದಲ್ಲಿ ಡ್ರಗ್ಸ್ ಸೇವಿಸಿ ತೂರಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.