ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿಯನ್ನು ಹಿಂದೂ ಯುವಕ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇರಿಸಿದ ಘಟನೆ ಮೈಲಪ್ಪನ ಹಳ್ಳಿಯಲ್ಲಿ ನಡೆದಿದೆ.
ಯುವತಿಯ ಪೋಷಕರ ವಿರೋಧದ ನಡುವೆಯೇ ಈ ವಿವಾಹ ನಡೆದಿದೆ. ನಾಗಾರ್ಜುನ (24) – ಫಸೀಹಾ (22) ಎಂಬವರೇ ಅಂತರ್ಧರ್ಮ ವಿವಾಹವಾದ ಜೋಡಿ. ಇವರಿಬ್ಬರೂ ಮದುವೆಯಾಗಿ ಬಳಿಕ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಬಂದಾಗ ಇವರಿಬ್ಬರ ಪ್ರೇಮ ಬಯಲಾಗಿದೆ.
ಇವರಿಬ್ಬರೂ ನೆರೆಹೊರೆಯವರಾಗಿದ್ದು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ವಿವಾಹದ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ ಇದಕ್ಕೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಇದರಿಂದ ಇವರು ಪೊಲೀಸ್ ರಕ್ಷಣೆ ಕೋರಿದ್ದಾರೆ. ಇಬ್ಬರ ಪೋಷಕರು ಠಾಣೆಗೆ ಆಗಮಿಸಿದರೂ ಫಸೀಹಾ ನಾಗಾರ್ಜುನನ ಜೊತೆಗೆಯೇ ಇರುವುದಾಗಿ ನಿರ್ಧಾರ ಮಾಡಿದ್ದು, ಕೊನೆಗೆ ಮದುವೆಯಾಗಿದ್ದಾರೆ.