ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರಿಗೆ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಅವರ ಸ್ನೇಹಿತ ರಾಹುಲ್ ತೋನ್ಸೆಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33 ನೇ ಎಸಿಜೆಎಂ ಕೋರ್ಟ್ ಆದೇಶ ಹೊರಡಿಸಿದೆ.
ದಂಡ ಕಟ್ಟುವ ಹಣದಲ್ಲಿ 10 ಸಾವಿರ ರೂ. ಕಡಿತಗೊಳಿಸಿ ಉಳಿದ ಹಣವನ್ನು ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡ ತೆತ್ತಲ್ಲಿ ಜೈಲು ಶಿಕ್ಷೆ ರದ್ದು ಮಾಡಲಾಗುವುದು. ಒಂದು ವೇಳೆ ಪರಿಹಾರ ಮೊತ್ತ ಪಾವತಿಸದೆ ಜೈಲು ಶಿಕ್ಷೆ ಅನುಭವಿಸಿದರೂ ದೂರುದಾರರಿಗೆ ಪರಿಹಾರ ಮೊತ್ತ ನೀಡುವುದರಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಸಂಜನಾಗೆ ಹೇಳಿ ರಾಹುಲ್ ಸಂಜನಾರಿಂದ 45 ಲಕ್ಷ ರೂ. ಪಡೆದಿದ್ದ ಎನ್ನಲಾಗಿದೆ.