ಯಾದಗಿರಿ: ಅಪ್ರಾಪ್ತ ಯುವತಿಯ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದ ಸೈದಾಪುರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಬಲರಾಮ್ ಎಂದು ಗುರುತಿಸಲಾಗಿದೆ.
16 ವರ್ಷದ ಯುವತಿಯ ಜೊತೆಗೆ ನಿನಗೆ 18 ವರ್ಷ ತುಂಬಿದಾಗ ಮದುವೆಯಾಗುತ್ತೇನೆ ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ. ನಿರಂತರವಾಗಿ ಎರಡು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದ. ಆಕೆಗೆ 18 ತುಂಬುತ್ತಿದ್ದ ಹಾಗೆ ರಿಜಿಸ್ಟರ್ ಮದುವೆಯಾಗಿದ್ದು, ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಮಾತ್ರ ನಿರಾಕರಿಸಿದ್ದಾನೆ.
ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.