ಬೆಂಗಳೂರು: ನಾಗ ವಾರದ ಖಾಸಗಿ ಕಂಪನಿಯೊಂದರ ಉದ್ಯೋಗಿ, ಬಿಜೆಪಿ ಕಾರ್ಯಕರ್ತ ಕೊಡಗಿನ ವಿನಯ್ ಆತ್ಮಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಹಣ್ಣೂರು ಪೊಲೀಸರ ಕೈ ಸೇರಿದೆ.
ಈ ವರದಿಯಲ್ಲಿ ಹೇಳಲಾದ ಅಂಶಗಳ ಆಧಾರದಲ್ಲಿ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಜೊತೆಗೆ ಇನ್ನೆರಜು ದಿನಗಳಲ್ಲಿ ವಿಧಿವಿಜ್ಞಾನ ಪ್ರಯೇಗಾಲಯಕ್ಕೆ ಕಳುಹಿಸಲಾದ ಮೃತ ವಿನಯ್ ಅವರ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡೆತ್ ನೋಟ್ ಕುರಿತ ವರದಿಗಳೂ ಪೊಲೀಸರ ಕೈಸೇರಲಿದ್ದು, ಆ ಬಳಿಕವೂ ತನಿಖೆಗೆ ಮತ್ತಷ್ಟು ಚುರುಕು ದೊರೆಯಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೃತ ವಿನಯ್ ಡೆತ್ ನೋಟ್‌ನಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿ ಕಾಂಗ್ರೆಸ್‌ನ ತೆನ್ನೀರ್ ಮೈನಾಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದು, ಆತ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.