ಬೆಂಗಳೂರು: ಸಾಮಾಜಿಕ ಜಾಲತಾಣಗಳ ಅಕೌಂಟ್ ಮತ್ತು ವಾಟ್ಯಾಪ್ಗಳನ್ನೂ ಹ್ಯಾಕ್ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ನಡುವೆ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿಯೇ ವಂಚನೆಗೆ ಯತ್ನ ನಡೆಸಿರೋದು ಬೆಳಕಿಗೆ ಬಂದಿದೆ.
ವಾಟ್ಸಾಪ್ನಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಅಕ್ಷಯ್ ಅವರ ಫೋಟೋ, ಹೆಸರು ಬಳಸಿಕೊಂಡು ವಂಚಕರು ಹಣ ಕೇಳುತ್ತಿದ್ದು, ಬೇರೆ ನಂಬರ್ನಿಂದ ಅಕೌಂಟ್ ರಚಿಸಿರೋದು ಗೊತ್ತಾಗಿದೆ. ಹಣ ನೀಡುವಂತೆ IPS ಅಧಿಕಾರಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದು, ವಿಷಯವನ್ನು ಸ್ನೇಹಿತರು ಡಿಸಿಪಿ ಅಕ್ಷಯ್ ಗಮನಕ್ಕೆ ತಂದಿದ್ದಾರೆ. ಈಗಾಗಲೇ 3-4 ಸ್ನೇಹಿತರಿಗೆ ವಂಚಕರು ಮೆಸೇಜ್ ಕಳುಹಿಸಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಿದ್ದಾರೆ.



















