• Police Varthe
Monday, January 26, 2026
Police Varthe
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
Police Varthe
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
Home Blog

ಸಮಾರಂಭದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಪುತ್ತೂರು ಶಾಸಕ ಅಶೋಕ್ ರೈ ಮಾಡಿದ್ದೇನು?

Ranjith Madanthyar by Ranjith Madanthyar
May 3, 2024
in Blog
0
ಸಮಾರಂಭದಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಪುತ್ತೂರು ಶಾಸಕ ಅಶೋಕ್ ರೈ ಮಾಡಿದ್ದೇನು?

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":[],"tools_used":{"addons":1,"transform":1},"is_sticker":false,"edited_since_last_sticker_save":true,"containsFTESticker":false}

0
SHARES
1.2k
VIEWS
WhatsappTelegramShare on FacebookShare on Twitter

ಮಂಗಳೂರು: ಉಡುಪಿಯ ಸಮಾರಂಭವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸಮಸ್ಯೆಯನ್ನು ಆಲಿಸಿದ ಪುತ್ತೂರು ಶಾಸಕ ಅಶೋಕ್ ರೈ ಆ ಹುಡುಗನಿಗೆ ಮಾನವೀಯ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಘಟನೆಯನ್ನು ಶಾಸಕ ಅಶೋಕ್ ರೈ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾರ್ಮಿಕವಾಗಿ ವಿವರಿಸಿ, ಆ ಹುಡುಗನೊಂದಿಗೆ ಫೋಟೋಗೆ ಪೋಸ್ ನೀಡಿ ಶೇರ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ? ;

“ಉಡುಪಿಯ ಸಮಾರಂಭವೊಂದರಲ್ಲಿ ಸಿಕ್ಕಿದ ಹದಿಹರೆಯದ ಯುವಕ”

ಮದುವೆ, ಗೃಹಪ್ರವೇಶ ಮುಂತಾದ ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಬಹುತೇಕ ನನ್ನ ರಾಜಕೀಯವನ್ನು ಪಕ್ಕಕ್ಕೀಡುತ್ತೇನೆ. ಹಾಗಂತ ಅಲ್ಲೂ ಕೂಡಾ ನನ್ನ ಕಣ್ಣುಗಳು ಸುಮ್ಮನಿರುವುದಿಲ್ಲ… ಯಾವಾಗಲೂ ನನ್ನ ಸುತ್ತಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತದೆ… ಹೃದಯದಲ್ಲಿನ ಸಾಮಾಜಿಕ ಮಿಡಿತ ಕಡಿಮೆ ಆಗುವುದಿಲ್ಲ…. ಹೀಗಾಗಿಯೇ ಮೆದುಳು ಸದಾ ಜಾಗೃತವಾಗಿ ಕಾರ್ಯತತ್ಪರವಾಗಿರುತ್ತದೆ….

ಮೊನ್ನೆ ಉಡುಪಿಯಲ್ಲಿ ಇಂಥದ್ದೇ ಖಾಸಗಿ ಸಮಾರಂಭ ಒಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಾಮೂಲಿನಂತೆ ಕಾರ್ಯಕ್ರಮದಲ್ಲಿ ಇಷ್ಟಮಿತ್ರರನ್ನು, ಪರಿಚಯದವರನ್ನು ಭೇಟಿಯಾಗುವುದು, ಉಭಯ ಕುಶಲೋಪರಿ ವಿಚಾರಿಸುವುದು ಇತ್ಯಾದಿಗಳೆಲ್ಲ ಆದ ಬಳಿಕ ಆಪ್ತರ ಜೊತೆಗೂಡಿ ಭೋಜನವನ್ನೂ ಸವಿದೆ.

ಬಳಿಕ ಊಟ ಮಾಡಿದ ತಟ್ಟೆಯನ್ನು ಇಟ್ಟು ಕೈತೊಳೆಯಲೆಂದು ಹೊರಟಾಗ ಈ ಹುಡುಗ ನನ್ನ ಕಣ್ಣಿಗೆ ಬಿದ್ದ… ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾಗಿದ್ದ ಹುಡುಗ ಅತಿಥಿಗಳು ಊಟ ಮಾಡಿದ ತಟ್ಟೆಗಳನ್ನು ಎತ್ತಿಕೊಂಡು ಹೋಗಿ ತೊಳೆಯುತ್ತಿದ್ದ…. ಯಾಕೋ ಆ ದೃಶ್ಯ ನೋಡಿ ಮನಸು ಭಾರವಾಯಿತು. ಯಾರು ಹೆತ್ತ ಮಗನೋ…. ಮನೆಯಲ್ಲಿ ಅದೆಂಥಾ ಕಷ್ಟವಿದೆಯೋ…. ಕಾಲೇಜು ಕಲಿಯುವ ವಯಸ್ಸಿನಲ್ಲಿ ಇಲ್ಲಿ ಬಂದು ಎಂಜಲು ತಟ್ಟೆ ತೊಳೆಯುತ್ತಿದ್ದಾನಲ್ಲಾ ಅನ್ನಿಸಿ ಮನಸಿಗೆ ಒಂಥರಾ ಕಸಿವಿಸಿ ಎನಿಸಿತು.

ಸೀದಾ ಆ ಹುಡುಗನ ಬಳಿಗೆ ಹೋಗಿ ಮಾತನಾಡಿಸಿದೆ…. ಅವನ ಹೆಸರು ಮನೆಯ ಪರಿಸ್ಥಿತಿ, ಕಷ್ಟಗಳ ಬಗ್ಗೆ ತಿಳಿದುಕೊಂಡೆ… ( ಆ ಬಗೆಗಿನ ವಿವರಗಳು ಇಲ್ಲಿ ಅನಗತ್ಯ ಅಂತ ಭಾವಿಸುತ್ತೇನೆ) ಅವನ ಮುಂದಿನ ಶಿಕ್ಷಣಕ್ಕೆ ಅದ್ಯಾವ ರೀತಿಯ ಸಹಾಯ ಬೇಕಾದರೂ ಮಾಡುತ್ತೇನೆ ಅನ್ನುವ ಭರವಸೆ ನೀಡಿ ಅವನ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮಾತನಾಡಿದೆ… ಹುಡುಗನ ಮುಖದಲ್ಲಿ ಆ ಕ್ಷಣ ಮೂಡಿದ ಮಂದಹಾಸವನ್ನು ನಾನ್ಯಾವತ್ತೂ ಮರೆಯಲಾರೆ….

ಆ ಹುಡುಗನಿಗೆ ನನ್ನ ಫೋನ್ ನಂಬರ್ ನೀಡಿ… ಅವನ ಜೊತೆಗೊಂದು ಫೋಟೋ ಕ್ಲಿಕ್ಕಿಸಿ ಮತ್ತೆ ಪುತ್ತೂರಿಗೆ ಹೊರಡಲು ಕಾರು ಹತ್ತಿದಾಗ ಮನಸಿಗೇನೋ ಒಂದು ರೀತಿಯ ತೃಪ್ತಿ….. ಸಮಾರಂಭದಲ್ಲಿ ಸ್ನೇಹಿತರ ಜೊತೆಗೆ ಸವಿದ ಭೋಜನಕ್ಕಿಂತಲೂ ಒಂದು ತೂಕ ಹೆಚ್ಚಿನ ತೃಪ್ತಿ…..

ಆ ಚಿಗುರು ಮೀಸೆಯ ಯುವಕ ಯಾವತ್ತು ನನಗೆ ಕರೆ ಮಾಡುತ್ತಾನೋ ಎಂಬ ನಿರೀಕ್ಷೆಯಲ್ಲಿ…. ಅವನಿಗೆ ನನ್ನ ಕೈಯಲ್ಲಾದ ಸಹಾಯ ಮಾಡುವ ಅಪೇಕ್ಷೆಯಲ್ಲಿ.’
ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕೊಡಗೈ ದಾನಿ:

ಅಶೋಕ್ ರೈ ಅವರ ಮಾನವೀಯ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಶೋಕ್ ರೈ ಈಗಾಗಲೇ ಹಲವಾರು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿದ್ದು, ಪಕ್ಷಭೇದ, ಜಾತಿ, ಧರ್ಮ ನೋಡದೆ ನೆರವಿನ ಹಸ್ತ ಚಾಚುತ್ತಾ ಬರುತ್ತಿದ್ದಾರೆ. ರೈ ಎಸ್ಟೇಟ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅಶೋಕ್ ಕುಮಾರ್ ಕಷ್ಟದಲ್ಲಿರುವ ಮಂದಿಯ ಕಣ್ಣೀರೊರೆಸುವ ಕೆಲಸವನ್ನು 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಸಾವಿರಾರು ಮನೆಗಳಿಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದ್ದು, ಸುಮಾರು 15,800ಕ್ಕೂ ಅಧಿಕ ಮನೆಗಳಿಗೆ ನೇರವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. 15 ಸಾವಿರದಿಂದ 26

ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡಿದ್ದಾರೆ. ಅದರ ಜೊತೆ ಬಡವರಿಗೆ ಅನ್ನದಾನದಲ್ಲೂ ತೊಡಗಿದ್ದಾರೆ. ಟ್ರಸ್ಟ್ ವತಿಯಿಂದ ಈತನಕ ನೂರಾರು ಕುಟುಂಬಗಳಿಗೆ ವಾಸಕ್ಕೆ ಯೋಗ್ಯ ಮನೆ ನಿರ್ಮಿಸಿ ಕೊಡಲಾಗಿದೆ. 400 ಮಂದಿಗೆ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗಿದೆ. 1ಸಾವಿರದಷ್ಟು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿ, ಟೈಲರಿಂಗ್ ಯಂತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಬಡವರ ಮನೆಯ ಹೆಣ್ಮಕ್ಕಳಿಗೆ ಹಣಕಾಸು ನೆರವು ನೀಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 44 ಗ್ರಾಮಗಳಲ್ಲಿ ಇರುವ ಅಡಿಕೆ ಕೊಯ್ಯುವರು, ಬುಟ್ಟಿ ಹೆಣೆಯುವವರು, ದೀರ್ಘ ಕಾಲದಿಂದ ಮಲಗಿದಲ್ಲೇ ಇರುವ ರೋಗಿಗಳನ್ನು ಆರೈಕೆ ಮಾಡುವವರು, ನಾಟಿ ವೈದ್ಯರು, ಉತ್ತಮ ಸೇವೆ ನೀಡುವ ಅಂಚೆ ಪಾಲಕರು, ಮೆಸ್ಕಾಂ ಉದ್ಯೋಗಿಗಳು, ಉತ್ತಮ ಹೈನುಗಾರಿಕೆ ನಡೆಸುತ್ತಿರುವ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ಅಶೋಕ್ ರೈ ಇತ್ತೀಚೆಗೆ ಬೆಂಗಳೂರಿನಲ್ಲಿ ಕಂಬಳ ನಡೆಸಿ ಯಶಸ್ವಿಯಾಗಿದ್ದರು. ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Previous Post

ಅಶ್ಲೀಲ ವಿಡಿಯೋ: ಈಶ್ವರಪ್ಪನ ಪುತ್ರ ಕಾಂತೇಶ್ ಮಾಧ್ಯಮಗಳಿಗೆ ನಿರ್ಬಂಧ ಕೋರಿ ಕೋರ್ಟಿಗೆ ಹೋಗಿದ್ದೇಕೆ?

Next Post

ಮುಂದಿನ ಮೂರು ಗಂಟೆಗಳಲ್ಲಿ ತುಳುನಾಡಿಗೆ ಭಾರೀ ಮಳೆ ಸಾಧ್ಯತೆ!

Related Posts

ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು
Blog

ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

January 21, 2026
ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ
Blog

ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

January 6, 2026
36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
Blog

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

January 6, 2026
ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Blog

ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

November 1, 2025
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ
Blog

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

October 31, 2025
ಕಾನೂನಿನ ಅನ್ವಯ ಕೆಂಪುಕಲ್ಲುಗೆ ಅವಕಾಶ ಕಲ್ಪಿಸಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ  ಕೆಂಪುಕಲ್ಲು ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ ಎಂದ ಸಚಿವ ದಿನೇಶ್ ಗುಂಡೂರಾವ್ ವಾರದೊಳಗೆ SOP ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ

July 23, 2025
Next Post
ಮುಂದಿನ ಮೂರು ಗಂಟೆಗಳಲ್ಲಿ ತುಳುನಾಡಿಗೆ ಭಾರೀ ಮಳೆ ಸಾಧ್ಯತೆ!

ಮುಂದಿನ ಮೂರು ಗಂಟೆಗಳಲ್ಲಿ ತುಳುನಾಡಿಗೆ ಭಾರೀ ಮಳೆ ಸಾಧ್ಯತೆ!

Leave a Reply Cancel reply

Your email address will not be published. Required fields are marked *

Stay Connected test

  • 23.9k Followers
  • 99 Subscribers
  • Trending
  • Comments
  • Latest
ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

April 29, 2024
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ನಾಪತ್ತೆಯಾಗಿದ್ದ ದಿಗಂತ್ ಪತ್ತೆ! ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಪ್ರಯತ್ನಕ್ಕೆ ಫಲ!

March 8, 2025
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

March 4, 2025
ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

July 17, 2024
Neha Hiremath Murder Case: ನೇಹಾ ಹತ್ಯೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್! 5 ದಿನದಿಂದಲೂ ಮಾಡಿದ್ದನಾ ಕೊಲೆಗೆ ಸಂಚು?

Neha Hiremath Murder Case: ನೇಹಾ ಹತ್ಯೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್! 5 ದಿನದಿಂದಲೂ ಮಾಡಿದ್ದನಾ ಕೊಲೆಗೆ ಸಂಚು?

0
ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

0
ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ; ಎ.26ರಂದು ಬ್ರಹ್ಮಕುಂಭಾಭಿಷೇಕ

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ; ಎ.26ರಂದು ಬ್ರಹ್ಮಕುಂಭಾಭಿಷೇಕ

0
ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಆತಂಕ: ವ್ಯಕ್ತಿಯ ಹತ್ಯೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಆತಂಕ: ವ್ಯಕ್ತಿಯ ಹತ್ಯೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

0
ಮಂಗಳೂರು; 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್”  ಸದಸ್ಯನ ಬಂಧನ

ಮಂಗಳೂರು; 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್”  ಸದಸ್ಯನ ಬಂಧನ

January 22, 2026
ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

January 21, 2026
ಪ್ರವಾಸಿಗರ ಸ್ವರ್ಗ ಮಾಡಲು ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ; ಡಿ.ಕೆ. ಶಿವಕುಮಾರ್

ಪ್ರವಾಸಿಗರ ಸ್ವರ್ಗ ಮಾಡಲು ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ; ಡಿ.ಕೆ. ಶಿವಕುಮಾರ್

January 10, 2026
ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿ ವಂಚನೆ ಯತ್ನ!

ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿ ವಂಚನೆ ಯತ್ನ!

January 10, 2026

Recent News

Facebook Twitter
Police Varthe

We bring you the best Premium WordPress Themes that perfect for news, magazine, personal blog, etc. Check our landing page for details.

Follow Us

Browse by Category

  • Blog
  • ಕ್ರೀಡೆ
  • ಕ್ರೈಂ ನ್ಯೂಸ್
  • ಪಿವಿ ವಿಶೇಷ
  • ಪೊಲೀಸ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ

Recent News

ಮಂಗಳೂರು; 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್”  ಸದಸ್ಯನ ಬಂಧನ

ಮಂಗಳೂರು; 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್”  ಸದಸ್ಯನ ಬಂಧನ

January 22, 2026
ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

ಕೋಮುದ್ವೇಷ ಭಾಷಣ ಆರೋಪ: ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

January 21, 2026

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.