ಬೆಂಗಳೂರು: 5 ವರ್ಷದ ಹಿಂದಿನ ನವಜಾತ ಶಿಶು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮಹತ್ವದ ತೀರ್ಪೊಂದನ್ನು ನ್ಯಾಯಾಲಯ ಪ್ರಕಟಿಸಿದೆ.
ವಾಣಿ ವಿಲಾಸ ಆಸ್ಪತ್ರೆಯಿಂದ ಕಳೆದ 5 ವರ್ಷದ ಹಿಂದೆ ರಶ್ಮಿ ಎಂಬ ಮಹಿಳೆ ನವಜಾತ ಶಿಶುವೊಂದನ್ನು ಅಪಹರಣ ಮಾಡಿದ್ದಳು. ಈ ಸಂಬಂಧ ಚಾಮರಾಜನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆ ಬಳಿಕ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು.
ಈ ಪ್ರಕರಣದ ಆರೋಪಿ ರಶ್ಮಿ ತಲೆಮರೆಸಿಕೊಂಡಿದ್ದು, 1 ವರ್ಷದ ಬಳಿಕ ಆಕೆಯನ್ನು ಬಂಧಿಸಲಾಗಿತ್ತು. ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು. ಅದರ ವಿಚಾರಣೆ ಮುಗಿಸಿದ ಕೋರ್ಟ್ ಅಪರಾಧಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.