ಚಾರ್ಮಾಡಿ: ಘಾಟ್‌ನಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸೊಂದರ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿದ್ದು, ಚಾಲಕ ಸಮಯಪ್ರಜ್ಞೆಯಿಂದ ಭಾರೀ ಪ್ರಮಾಣದ ದುರಂತವೊಂದು ತಪ್ಪಿದೆ.
ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸು ಚಾರ್ಮಾಡಿ ಘಾಟ್‌ನ ತಿರುವು ಮುರುವು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ತುಂಡಾಗಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಚಾಲಕ ಚಾಕಚಕ್ಯತೆಯಿಂದ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ದೊಡ್ಡ ಪ್ರಮಾಣದ ಅಪಾಯವೊಂದನ್ನು ತಪ್ಪಿಸಿ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ್ದಾರೆ.
ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದು, ಅವರನ್ನು ಬದಲಿ ಬಸ್ಸಿನಲ್ಲಿ ಕಳುಹಿಸುವ ಕಾರ್ಯ ನಡೆದಿದೆ.