ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಸಿನಿಮಾ ಚಿತ್ರೀಕರಣಕ್ಕಾಗಿ ನಗರ ಬಿಟ್ಟು ಬೇರೆ ಕಡೆಗೆ ತೆರಳಲು ಹೈಕೋರ್ಟ್ ಅವಕಾಶ ನೀಡಿದೆ.
ಸಿನೆಮಾ ಶೂಟಿಂಗ್‌ಗಾಗಿ ಬೆಂಗಳೂರು ಹೊರತಾಗಿ ಬೇರೆ ಸ್ಥಳಗಳಿಗೆ ತೆರಳಲು ಅವಕಾಶ ನೀಡುವಂತೆ ಕೋರಿ ದರ್ಶನ್ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಹೊರ ದೇಶಗಳಿಗೆ ತೆರಳಲು ದರ್ಶನ್‌ಗೆ ನ್ಯಾಯಾಲಯದ ಅನುಮತಿ ಪಡೆಯುವುದು ಅನಿವಾರ್ಯವಾಗಿತ್ತು. ಸಿನಿಮಾ ಶೂಟಿಂಗ್‌ಗಾಗಿ ಬೆಂಗಳೂರಿನ ಹೊರತಾದ ಸ್ಥಳಗಳಿಗೆ ಹೋಗಲು ಕೋರ್ಟ್ ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದ್ದರು.
ಈ ಬೇಡಿಕೆಗೆ ಎಸ್ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದು, ನಿಲ್ಲುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ 8 ವಾರಗಳ ಹೇಳಿದ್ದರು. ಈಗ ಶೂಟಿಂಗ್‌ಗೆ ಅವಕಾಶ ಕೇಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಕೊನೆಗೆ ನ್ಯಾಯಾಲಯವು ದರ್ಶನ್ ಜಾಮೀನಿನ ಷರತ್ತುಗಳನ್ನು ಸಡಿಲಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಬಿಟ್ಟು ಬೇರೆಡೆ ಶೂಟಿಂಗ್‌ಗೆ ತೆರಳಲು ಅವರಿಗೆ ಅವಕಾಶ ಕಲ್ಪಿಸಿದೆ.