ಸುಳ್ಯ: ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಪಕ್ಕದ ಬ್ಯಾಂಕ್ ಆಫ್ ಬರೋಡಾ ಸಮೀಪದಲ್ಲಿರುವ ನಂದಿನಿ ಸ್ಟಾಲ್‌ಗೆ ಕಂಟೇನರ್ ಒಂದು ಢಿಕ್ಕಿ ಹೊಡೆದಿದ್ದು, ಸ್ಟಾಲ್‌ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಂಟೇನರ್ ವಾಹನ ಮಂಡ್ಯದಿಂದ ಮುಂಜಾನೆ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ತುಂಬಿಕೊಂಡು ಬರುತ್ತಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಮೀಪದ ಫುಟ್ಪಾತ್‌ನ ತಡೆಬೇಲಿಗೆ ಢಿಕ್ಕಿ ಹೊಡೆದಿದ್ದು, ಅಲ್ಲಿಂದ ಫ್ಲವರ್ ಸ್ಟಾಲ್‌ನ ಮುಂಭಾಗದ ಟೆಂಟ್‌ಗೆ ಢಿಕ್ಕಿ ಹೊಡೆದಿದೆ. ಬಳಿಕ ಬ್ಯಾಂಕ್‌ನ ಮುಂಭಾಗದ ಕಾಂಪೌಡ್‌ಗೆ ಗುದ್ದಿ ಅನಂತರ ನಂದಿನಿ ಸ್ಟಾಲ್‌ಗೆ ಗುದ್ದಿ ಕಂಟೇನರ್ ಮಗುಚಿ ಬಿದ್ದಿದೆ.
ಈ ಸಂದರ್ಭದಲ್ಲಿ ಜನಸಂಖ್ಯೆ ವಿರಳವಾಗಿದ್ದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ. ಕಂಟೇನರ್ ಅಡಿಯಲ್ಲಿ ಸ್ಕೂಟಿಯೊಂದು ಸಿಲುಕಿರುವ ಬಗ್ಗೆ ವರದಿಯಾಗಿದೆ.