ಬೆಂಗಳೂರು: ನಟಿ, ಗೋಲ್ಡ್ ಸ್ಮಗ್ಲರ್ ರನ್ಯಾ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆಕೆಯ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಮೇಲೆಯೂ ಈಗ ಆರೋಪ ಕೇಳಿ ಬಂದಿದೆ.
ರನ್ಯಾ ಪ್ರತಿ ಬಾರಿ ವಿದೇಶಕ್ಕೆ ಹೋಗುವಾಗಲೂ ತನ್ನ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ವಿಐಪಿ ಪ್ರೊಟೋಕಾಲ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಹಾಗೆಯೇ ರನ್ಯಾ ವಿದೇಶಕ್ಕೆ ಹೋಗುವಾಗೆಲ್ಲಾ ಡಿಜಿಪಿ ರಾವ್ ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದರು ಎಂಬ ಮಾಹಿತಿಯೂ ತಿಳಿದು ಬಂದಿದೆ. ಅವರೇ ರನ್ಯಾಗೆ ಪ್ರೊಟೋಕಾಲ್ ನೀಡುವಂತೆ ಸೂಚನೆ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರ ಕೈವಾಡ ಇದೆಯೋ? ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ರನ್ಯಾ ವಿಐಪಿ ಪ್ರೊಟೊಕಾಲ್ ಬಳಸಿ ಭದ್ರತಾ ತಪಾಸಣೆ ಇಲ್ಲದೆ ಚಿನ್ನ ಸಾಗಾಟ ಮಾಡುತ್ತಿದ್ದಳು ಎನ್ನುವ ಆರೋಪವೂ ಕೇಳಿ ಬಂದಿದೆ. ತನ್ನ ತಂದೆಯ ಹೆಸರನ್ನು ಬಳಿಸಿಕೊಂಡು ಅವಳು ಚಿನ್ನ ಸಾಗಾಟ ಮಾಡುತ್ತಿದ್ದಳು ಎಂದು ತಿಳಿದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ಪೊಲೀಸ್ ಸೂಚಿಸಲಾಗಿದೆ.