ದೆಹಲಿ: ಮಕ್ಕಳ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಬೇಕು ಎನ್ನುವಷ್ಟರ ಮಟ್ಟಿಗೆ ದ್ವೇಷ ತುಂಬಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷಿ ನುಡಿಯುತ್ತಿದೆ. ಇದು ಮಕ್ಕಳನ್ನು ಪೋಷಕರು, ಸುತ್ತಮುತ್ತಲಿನ ಸಮಾಜ ಯಾವ ರೀತಿಯ ಮಾನಸಿಕತೆಯಲ್ಲಿ ಬೆಳೆಸುತ್ತಿದೆ ಎನ್ನುವುದರ ಎಚ್ಚರಿಕೆಯಾಗಿದ್ದು, ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸದೆ ಹೋದರೆ ಪರಿಣಾಮ ಹೇಗಿರುತ್ತದೆ ಎನ್ನುವುದಕ್ಕೆ ಸಾಕ್ಷಿ ನುಡಿಯುವಂತಿದೆ.
ಸಣ್ಣ ಬಾಲಕಿಯೊಬ್ಬಳು AK-47 ಗನ್ ಹಿಡಿದು ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಇದಾಗಿದೆ. ಇದು ಎಲ್ಲಿ ನಡೆದದ್ದು, ಯಾವಾಗ ಬಿಡುಗಡೆಯಾದ ವಿಡಿಯೋ ಎನ್ನುವುದು ತಿಳಿದು ಬಂದಿಲ್ಲ.
ಮೋದಿ, ನೀವು ಏನೇ ಆಗಿದ್ದರೂ ಮೂರನೇ ಮನುಷ್ಯ, ನೀವು ನಮ್ಮ ದೇಶದ ತಂದೆ, ತಾಯಿ, ಮಕ್ಕಳನ್ನು ಕೊಂದರೆ, ನಾನು ನಿಮ್ಮನ್ನು ಕೊಲ್ಲುತ್ತೇನೆ. ನೀವು ನೋಡುತ್ತಿರಿ, ನನ್ನ ಬಳಿಯಲ್ಲಿ ಸಾಕಷ್ಟು ಗುಂಡುಗಳಿವೆ. ಕೇವಲ ಎರಡೇ ಹೊಡೆತದಲ್ಲಿ ನಾನು ನಿಮ್ಮನ್ನು ಹತ್ಯೆ ಮಾಡುತ್ತೇನೆ. ಆ ಬಳಿಕ ನೀವು ಎಂದೂ ಜೀವಂತವಾಗಿರಲು ಸಾಧ್ಯವಿಲ್ಲ. ಯಾವ ಡಾಕ್ಟರ್ ಸಹ ನಿಮ್ಮನ್ನು ಗುಣಪಡಿಸಲು ಸಾಧ್ಯವಿಲ್ಲ. ಶಾಶ್ವತವಾಗಿ ನೀವು ಇಲ್ಲವಾಗುತ್ತೀರಿ. ಅಲ್ಲಾಹ್ ನಿಮ್ಮ ಬಗ್ಗೆ ಸಂತೋಷ ಪಡುವುದಿಲ್ಲ ಎಂದು ಈ ವಿಡಿಯೋದಲ್ಲಿ ಬಾಲಕಿ ಬೊಬ್ಬೆ ಹೊಡೆದಿದ್ದಾಳೆ.