ಬೆಂಗಳೂರು: ಪೊಲೀಸ್ ಸೋಗಿನಲ್ಲಿ ನಗರದ ಯುವಕ – ಯುವತಿಯರಿಗೆ ಕಿರಿಕಿರಿ ಮಾಡುತ್ತಿದ್ದ ನಕಲಿ ಪೋಲೀಸ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆಸೀಫ್ ಎಂದು ಗುರುತಿಸಲಾಗಿದೆ.
ಪಾರ್ಕ್‌ನಲ್ಲಿರುವ ಜೋಡಿಗಳನ್ನೇ ಟಾರ್ಗೆಟ್ ಮಾಡಿ ಈತ ತಾನು ಪೊಲೀಸ್ ಎಂದು ಹೇಳಿಕೊಂಡು ಹಣ ಕೀಳುತ್ತಿದ್ದ. ಕಿರುಕುಳ ನೀಡುತ್ತಿದ್ದ. ಆರೋಪಿಯು ಇಬ್ಬರಿಂದ 12 ಗ್ರಾಂ ನ ಚಿನ್ನದ ಸರ, 5 ಗ್ರಾಂನ ಉಂಗುರ, ಹತ್ತು ಸಾವಿರ ರೂ. ತೆಗೆದುಕೊಂಡು ನಾಪತ್ತೆಯಾಗಿದ್ದ.
ಈತ ಪೊಲೀಸ್ ಎಂದು ಹೇಳಿಕೊಂಡು ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ.