ಬೀದರ್: ಅಕ್ರಮವಾಗಿ ಸಾಗಿಸುವ ಸಲುವಾಗಿ ಬಚ್ಚಿಟ್ಟ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ ಘಟನೆ ಔರಾ ತಾಲೂಕಿನ ವಿಜಯನಗರ ತಾಂಡಾ ಶಿವಾರದಲ್ಲಿ ನಡೆದಿದೆ. ಗಾಂಜಾ ಪತ್ತೆ ಕೆಲಸವನ್ನು ಪೊಲೀಸ್ ಶ್ವಾನ ‘ದೀಪಾ’ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆರೋಪಿಯನ್ನು ಅಂಬಾಜಿ(56) ಎಂದು ಗುರುತಿಸಲಾಗಿದೆ. ಈತ ಸೊಯಾಬಿನ್ ಹೊಟ್ಟಿನಲ್ಲಿ 56 ಕೆಜಿ ಗಾಂಜಾವನ್ನು ಬಚ್ಚಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಂತಪೂರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ಘಟಕದ ಶ್ವಾನ ದೀಪ ಅಡದಿಸಿಟ್ಟಿದ್ದ ಗಾಂಜಾವನ್ನು ಪತ್ತೆ ಮಾಡಿದೆ.