ಮಂಗಳೂರು: ಹಾಗೆ ನೋಡಿದರೆ ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ತಾನು ಮೂರು ಬಾರಿ ಪ್ರತಿನಿಧಿಸಿದ ರಘುಪತಿ ಭಟ್ಟರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಟಿಕೇಟು ನಿರಾಕರಿಸಲು ಕಾರಣವೇ ಇರಲಿಲ್ಲ. ಆದರೆ, ‘ಹೊಸಬರಿಗೆ ಅವಕಾಶ’ ಕೊಡಲು ಅವರಿಗೆ ಟಿಕೆಟ್ ನಿರಾಕರಿಸಲಾಯಿತು.
ಪದವೀಧರ ಕ್ಷೇತ್ರದ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಮಾತು ಕೊಟ್ಟ ಕಾರಣ ಭಟ್ಟರು ಹೊಸ ಹೊಸ ಅರ್ಹ ಪದವೀಧರ ಮತದಾರರನ್ನು ಸದಸ್ಯರನ್ನಾಗಿ ಮಾಡಿ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದರು.
ಅಷ್ಟರಲ್ಲಿ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಯಿತು ನೋಡಿ. ಆದರೆ ಭಟ್ಟರಿಗೆ ಟಿಕೆಟ್ ನೀಡದೆ ಕಾಂಗ್ರೆಸ್‌ನಿಂಸ ಬಂದ ಧನಂಜಯ ಸರ್ಜಿಗೆ ಟಿಕೆಟ್ ನೀಡಲಾಯಿತು. ಆಗಲೇ ಭಟ್ಟರಿಗೆ ತನ್ನ ವಿರುದ್ಧ ಷಡ್ಯಂತ್ರ ನಡೆದಿರುವುದು ಗೊತ್ತಾಯಿತು.
ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದರೆ ಭಟ್ಟರು ಮಾತಾಡುತ್ತಿರಲಿಲ್ಲ. ಆದರೆ ಈಗಿನ ಅಭ್ಯರ್ಥಿ ಕಾಂಗ್ರೆಸ್‌ನಿಂದ ಬಂದವರಾಗಿದ್ದರು.
ಅಷ್ಟು ಮಾತ್ರವಲ್ಲ ಆಯನೂರು ಮಂಜುನಾಥ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಾಗಲೂ ಕಾರ್ಯಕರ್ತರು ಗೆಲ್ಲಿಸಿದರು. ಆದರೆ ಇದೀಗ ಆಯನೂರು ಕಾಂಗ್ರೆಸ್ ಅಭ್ಯರ್ಥಿ.
ತೇಜಸ್ವಿನಿ ಗೌಡರನ್ನ ಬಿಜೆಪಿಗೆ ಕರೆತಂದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಆದರೆ ಇದೀಗ ಕಾಂಗ್ರೆಸ್‌ಗೆ ಹಾರಿ ಮೋದಿ, ಬಿಜೆಪಿಗೆ ಬಯ್ಯುತ್ತಿದ್ದಾರೆ.
ಕೆ.ಪಿ ನಂಜುಂಡಿ ಯವರನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಕರೆತಂದು ವಿಧಾನ ಪರಿಷತ್ ಸದಸ್ಯರಾಗಿ ಮಾಡಲಾಯಿತು. ಆದರೆ ಇದೀಗ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ.
ಇದೀಗ ಕಾಂಗ್ರೆಸ್‌ನಿಂದ ಆಮದು ಮಾಡಿಕೊಂಡ, ಹಿಂದೂ ವಿರೋಧಿ ಎಂದೇ ನಾಮಾಂಕಿತರಾಸ ಧನಂಜಯ ಸರ್ಜಿ ಇದೀಗ ಬಿಜೆಪಿ ಅಭ್ಯರ್ಥಿ. ಮುಂದಿನ ಬಾರಿ ಅವರು ಮತ್ತೆ ಕಾಂಗ್ರೆಸ್‌ನಿಂದ ಆಫರ್ ಬಂದರೆ ತೆರಳಬಹುದು.
ಹೀಗೆ ಆಮದು ಅಭ್ಯರ್ಥಿಗಳು ಗೆದ್ದ ಮೇಲೆ ಕಾರ್ಯಕರ್ತರನ್ನ ಮರೆತರು. ಕಾರ್ಯಕರ್ತರು ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಲಷ್ಟೇ ಸೀಮಿತವೇ? ಹಾಗಾದರೆ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಭಟ್ಟಂಗಿಗಳು ಯಾರು ಎನ್ನುವುದು ಇದೀಗ ಕಾರ್ಯಕರ್ತರ ಮುಂದಿರುವ ಪ್ರಶ್ನೆ.
ಇಂಥದೊಂದು ಕೆಟ್ಟ ಸಂಪ್ರದಾಯ ನಿಲ್ಲಬೇಕು, ಕಾರ್ಯಕರ್ತರು ಯಾರನ್ನೂ ಬೇಕಾದರೂ ಗೆಲ್ಲಿಸುತ್ತಾರೆ ಎಂಬ ವರಿಷ್ಠರ ಅಹಂಕಾರಕ್ಕೆ ಮದ್ದು ಅರೆಯಬೇಕೆಂಬ ನಿಟ್ಟಿನಲ್ಲಿ ರಘುಪತಿ ಭಟ್ಟರನ್ನು ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿ ಗೆಲ್ಲಿಸಲು ಮನವಿ ಮಾಡಿದ್ದಾರೆ