ಕಲ್ಬುರ್ಗಿ: ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಬಾಣಂತಿ ಮತ್ತು ನವಜಾತ ಶಿಶುವೊಂದು ಮೃತಪಟ್ಟಿದ್ದು, ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಚಿದೆ.
ಮೃತರನ್ನು ಸಹಾ ಪರ್ವೀನ್ ಎಂದು ಗುರುತಿಸಲಾಗಿದ್ದು, ಅವರ ಹಸುಗೂಸು ಸಹ ಮೃತಪಟ್ಟಿದೆ.
ಸಭಾ ಅವರನ್ನು ಹೆರಿಗೆಗಾಗಿ ಭಾನುವಾರ ಸಂಜೆಯೇ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಈ ಸಂದರ್ಭದಲ್ಲಿ ವೈದ್ಯರು ಹೆರಿಗೆಯ ಮೊದಲೇ ಗರ್ಭದಲ್ಲೇ ಶಿಶು ಮೃತಪಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಆದರೆ ಲೋ ಬಿಪಿಯ ಕಾರಣಕ್ಕೆ ತಾಯಿಯೂ ಮೃತಪಟ್ಚ ಘಟನೆ ನಡೆದಿದೆ.
ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕುಪಿತಗೊಂಡ ಕುಚುಂಬದವರು ಆಸ್ಪತ್ರೆಯಲ್ಲಿನ ಗಾಜು, ಪೀಠೋಪಕರಣಗಳನ್ನೆಲ್ಲಾ ಪುಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ RG ನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.