ಡೆಹ್ರಾಡೂನ್: ಅಕ್ರಮ ಮದರಸಾಗಳ ವಿರುದ್ಧ ಉತ್ತರಾಖಂಡ್‌ನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಅಕ್ರಮವಾಗಿ ನಿರ್ಮಾಣ ಮಾಡಲಾದ 52 ಮದರಸಾಗಳನ್ನು ಕೇವಲ 15 ದಿನಗಳಲ್ಲಿ ಸೀಲ್ ಮಾಡಿದೆ. ನೋಂದಣಿಯಾಗದ ಮತ್ತು ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿದ್ದ ಅಕ್ರಮ ಮದರಸಾಗಳ ವಿರುದ್ಧ ಸಿಎಂ ಪುಷ್ಕರ್‌ಸಿಂಗ್ ಧಾಮಿ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿರುವುದಾಗಿದೆ.
ರಾಜ್ಯದ ಪಶ್ಚಿಮ ಡೆಹ್ರಾಡೂನ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಮದರಸಾಗಳ ಸಂಖ್ಯೆ ಬೆಳೆಯುತ್ತಿದೆ. ಇವುಗಳು ತಮ್ಮ ಮೂಲ ಉದ್ದೇಶದಿಂದ ಹೊರತಾಗಿ ಜನಸಂಖ್ಯಾ ಅಸಮತೋಲನ ಸೃಷ್ಟಿ ಮಾಡುವ ವೇದಿಕೆಗಳಾಗಿಯೂ ಕೆಲಸ ಮಾಡುತ್ತಿವೆ. ಈ ಸಂಬಂಧ ಗುಪ್ತಚರ ಇಲಾಖೆಯೂ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಈ ಮಾಹಿತಿಯನ್ನು ಆಧರಿಸಿ ಅಕ್ರಮ ಮದರಸಾಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿದೆ.