ಲಕ್ನೋ: ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಹಾಗೆ ಶಾಶ್ವತ ಶಬ್ಧ ನಿಯಂತ್ರಣ ಕ್ರಮ ಅನುಸರಿಸಲಾಗಿವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಹೇಳಿದ್ದಾರೆ.
ಅವರು ಸರ್ಕ್ಯೂಟ್ ಹೌಲ್‌ನಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಪರುಶೀಲಿಸಿ, ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚೇಚಿನ ಪ್ರಮಾಣದ ಡಿಜೆ ಬಳಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜೊತೆಗೆ ಬ್ಯಾಂಕ್, ಅಂಗಡಿಗಳು, ಹಣಕಾಸು ಸಂಸ್ಥೆಗಳು, ವಾಣಿಜ್ಯ ಉದ್ದೇಶಗಳ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಸುವಂತೆಯೂ ಸೂಚಿಸಿದ್ದಾರೆ. ಹಾಗೆಯೋಗೋಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿರುವ ಅವರು ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಗೋಲುಗಳನ್ನು ಕಳ್ಳಸಾಗಾಟ ಮಾಡುವವರು, ಅದಕ್ಕೆ ಬಳಸಿದ ವಾಹನ, ಅದರ ಮಾಲೀಕರು ಮತ್ತು ಪೊಲೀಸರ ವಿರುದ್ಧ ಸಹ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಗೋಕಳ್ಳಸಾಗಾಟದ ಮೇಲೆ ಸಂಪೂರ್ಣ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಜಿಲ್ಲಾವಾರು ಪರಿಶೀಲನೆ ನಡೆಸುವಂತೆಯೂ ಅವರು ಹೇಳಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವುದು, ವಿಳಂಬ ಧೋರಣೆ ವಿರುದ್ಧ ಕ್ರಮ ಮತ್ತು ನಿರ್ಮಾಣ ಹಂತದಲ್ಲಿರುವ ಪ್ರತಿಯೊಂದು ಯೋಜನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲು, ಸಾಪ್ತಾಹಿಕ ತಪಾಸಣೆ ನಡೆಸಲು ಮತ್ತು ಪ್ರಗತಿ ವರದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಯೋಗೀಜಿ ಅವರು ನಿರ್ದೇಶನ ನೀಡಿದ್ದಾರೆ.