ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತರಾದ ಬೆಳಗಾವಿಯ ನಾಲ್ವರು ಕುಟುಂಬಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ತಲಾ 25 ಲಕ್ಷದಂತೆ ಒಟ್ಟು 1 ಕೋಟಿ ರೂ. ಪರಿಹಾರ ಧನವನ್ನು ನೀಡಿದೆ.
ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದು, ಮೃತರಾದ ಜ್ಯೋತಿ ಹತ್ತರವಾಡ, ಮೇಘ ಹತ್ತರವಾಡ, ಮಹಾದೇವಿ ಬಾವನೂರ ಮತ್ತು ಅರುಣ್ ಕೋಪರ್ಡೆ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ನೇರವಾಗಿ ಜಮೆ ಮಾಡಲಾಗಿದೆ.
ಕಾಲ್ತುಳಿತಕ್ಕೆ ಒಳಗಾಗಿ 40 ದಿನ ಕಳೆದುದ್ದು, ಅಷ್ಟರೊಳಗಾಗಿ ಯೋಗೀಜಿ ಸರ್ಕಾರ ಪರಿಹಾರ ಹಣವನ್ನು ನೀಡಿದೆ. ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದ ಯೋಗೀಜಿ ಸರ್ಕಾರ ಈಗ ನುಡಿದಂತೆ ನಡೆಯುವ ಮೂಲಕ ಜನರ ಮನಸ್ಸನ್ನು ಗೆದ್ದಿದೆ.